ಲಾಗ್ ಇನ್ ಮಾಡಿ ಅಥವಾ ಸೈನ್ ಅಪ್ ಮಾಡಿ

ನಿಮಗೆ ಇನ್ನಷ್ಟು ಸ್ಮಾರ್ಟ್ ಪ್ರತಿಕ್ರಿಯೆಗಳು ದೊರೆಯುತ್ತವೆ ಮತ್ತು ಫೈಲ್‌ಗಳು, ಇಮೇಜಸ್ ಹಾಗೂ ಇನ್ನಷ್ಟನ್ನು ಅಪ್‌ಲೋಡ್ ಮಾಡಬಹುದು.

ಡಾಟ್ಸ್ ಪರಿಚಯಿಸಲಾಗುತ್ತಿದೆ

ಅಸಾಧಾರಣ ಸಾಮರ್ಥ್ಯವುಳ್ಳ, ಸದಾ ಕಾರ್ಯನಿರತವಾಗಿರುವ, ಎಲ್ಲವನ್ನೂ ನಿಭಾಯಿಸಲು ರೂಪಿಸಲಾದ ಏಜೆಂಟ್‌ಗಳು.

ನಿಮ್ಮ ಡಾಟ್ ರಚಿಸಿ

ಡಾಟ್ಸ್‌ನೊಂದಿಗೆ ಪ್ರಾರಂಭಿಸಿ

ನಿಮ್ಮ ಡಾಟ್ ಅನ್ನು ನಿಮ್ಮದೇ ಮತ್ತೊಂದು ಕೈ ಎಂದುಕೊಳ್ಳಿ. ಅದು ನಿಮ್ಮ ಕೆಲಸದ ವಿಧಾನವನ್ನು ಕಲಿತು, ಗಮನ ನೀಡಬೇಕಾದ ವಿಷಯಗಳನ್ನು ಗುರುತಿಸಿ, ತನ್ನದೇ ಕಂಪ್ಯೂಟರ್ ಬಳಸಿ ನಿಮ್ಮ ಪ್ರಾಜೆಕ್ಟ್‌ಗಳನ್ನು ಮುಂದುವರಿಸುತ್ತದೆ.

ನಿಮ್ಮ ಡಾಟ್ ನಿಮ್ಮ ರೀತಿಯಲ್ಲೇ ಕೆಲಸ ಮಾಡುತ್ತದೆ

ನಿಮ್ಮ ChatGPT ನೆನಪಿನಲ್ಲಿರುವ ಸಂದರ್ಭದ ಮಾಹಿತಿಯೊಂದಿಗೆ ನಿಮ್ಮ ಡಾಟ್ ಕೆಲಸ ಪ್ರಾರಂಭಿಸುತ್ತದೆ. ಕೆಲಸಗಳನ್ನು ನಿರ್ವಹಿಸಲು ಅದು Codex ಮತ್ತು ನೀವು ಸಂಪರ್ಕಿಸಿದ ಪರಿಕರಗಳನ್ನು ಬಳಸುತ್ತದೆ. ಅದು ಯಾವ ಆ್ಯಪ್‌ಗಳನ್ನು ಪ್ರವೇಶಿಸಬಹುದು, ಯಾವುದಕ್ಕೆ ಗಮನ ಕೊಡಬೇಕು ಮತ್ತು ಕೆಲಸಗಳು ಹೇಗೆ ನಡೆಯಬೇಕೆಂದು ನೀವು ಆಯ್ಕೆಮಾಡುತ್ತೀರಿ.

ಪೂರ್ಣವಾಗಿ ನಿಭಾಯಿಸಲು ಒಂದು ಜವಾಬ್ದಾರಿ ವಹಿಸಿ

ದೊಡ್ಡ ಪ್ರಾಜೆಕ್ಟ್ ಆಗಲಿ, ಚಿಕ್ಕ ಕೆಲಸವನ್ನಾಗಲಿ ವಹಿಸಿ, ನಿಮ್ಮ ಹೊರೆ ಕಡಿಮೆ ಮಾಡಿಕೊಳ್ಳಿ. ನಿಮ್ಮ ಡಾಟ್ ತಾನಾಗಿಯೇ ಮುಂದಿನ ಹಂತಗಳನ್ನು ನಿರ್ಧರಿಸಿ, ಸಂಭಾಷಣೆಗಳ ನಡುವೆಯೂ ಕೆಲಸ ಮುಂದುವರಿಸುತ್ತದೆ. ಪರಿಶೀಲಿಸಬೇಕಾದ ಕೆಲಸ ಮತ್ತು ನಿಮ್ಮ ವಿವೇಚನೆ ಅಗತ್ಯವಿರುವ ನಿರ್ಧಾರಗಳನ್ನು ಅದು ನಿಮ್ಮ ಮುಂದಿಡುತ್ತದೆ.

ನಿಯಂತ್ರಣ ನಿಮ್ಮ ಕೈಯಲ್ಲಿದೆ

ನಿಮ್ಮ ಡಾಟ್ ಯಾವ ಕೆಲಸ ಮಾಡುತ್ತಿದೆ ಎಂದು ನೋಡಿ, ವಿವರಗಳನ್ನು ಪರಿಶೀಲಿಸಿ ಮತ್ತು ಪ್ರತಿಕ್ರಿಯೆ ನೀಡಿ. ಯಾವಾಗ ಬೇಕಾದರೂ ದಿಕ್ಕನ್ನು ಬದಲಿಸಿ ಅಥವಾ ವಿರಾಮಗೊಳಿಸಿ.

ಕೆಲಸದಲ್ಲಿ ನಿಮ್ಮ ಡಾಟ್ ಬಳಸಿ

ನೀವು ಎಲ್ಲಿ ಕೆಲಸ ಮಾಡಿದರೂ ನಿಮ್ಮ ಡಾಟ್ ನೆರವಾಗಬಲ್ಲದು. ಅದರ ಅನುಮತಿಗಳನ್ನು ನೀವು ನಿರ್ವಹಿಸುತ್ತೀರಿ. ಅದು ಯಾವಾಗ ಸ್ವತಂತ್ರವಾಗಿ ಕೆಲಸ ಮಾಡಬಹುದು ಮತ್ತು ಯಾವಾಗ ನಿಮ್ಮ ಅನುಮೋದನೆ ಬೇಕು ಎಂಬುದನ್ನೂ ನೀವೇ ನಿರ್ಧರಿಸುತ್ತೀರಿ.

ಬಿಡುವಿಲ್ಲದ ದಿನಗಳಿಗಾಗಿ ರೂಪಿಸಲಾಗಿದೆ

ನಿಮಗೆ ಮುಖ್ಯವಾದ ವಿಷಯಗಳಿಗೆ ಜೀವನದಲ್ಲಿ ಹೆಚ್ಚು ಅವಕಾಶ ಕಲ್ಪಿಸಲು ಡಾಟ್ಸ್ ನೆರವಾಗುತ್ತದೆ. ನಿಮ್ಮ ಕೆಲಸದಲ್ಲಿ ಅದು ಹೇಗೆ ನೆರವಾಗಬಹುದು ಎಂಬುದನ್ನು ತಿಳಿಯಿರಿ.

  • ಫೆಲಿಪೆ, ಹೂಡಿಕೆದಾರರ ಪ್ರಸ್ತುತಿಯನ್ನು ಅಪ್‌ಡೇಟ್ ಮಾಡುವಾಗ ಉತ್ಪನ್ನ ಮತ್ತು ಆದಾಯದ ಫಲಿತಾಂಶಗಳನ್ನು ಪರಿಶೀಲಿಸುತ್ತದೆ.

    ನಿಮ್ಮ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಿ

    ನೀವು ಹೂಡಿಕೆದಾರರಿಗೆ ಇತ್ತೀಚಿನ ಮಾಹಿತಿ ನೀಡಲು ಸಿದ್ಧತೆ ನಡೆಸುತ್ತಿರುವ ಹಣಕಾಸು ಮುಖ್ಯಸ್ಥರು. ನಿಮ್ಮ ಡಾಟ್ ಉತ್ಪನ್ನದ ಬಳಕೆ ಮತ್ತು ಆದಾಯದ ಮೇಲೆ ನಿಗಾ ಇಟ್ಟು, ಬದಲಾವಣೆಗಳನ್ನು ಗುರುತಿಸಿ, ನಿಮ್ಮ ಪ್ರಸ್ತುತಿಯನ್ನು ನವೀಕರಿಸುತ್ತದೆ. ನಿಮ್ಮ ಒಪ್ಪಿಗೆಯೊಂದಿಗೆ, ಅದು ಇತ್ತೀಚಿನ ಅಂಕಿಅಂಶಗಳನ್ನು ನಿಮ್ಮ ತಂಡದೊಂದಿಗೆ ಹಂಚಿಕೊಂಡು, ಸಂಬಂಧಿತ ದಾಖಲೆಗಳನ್ನೂ ಅದಕ್ಕೆ ತಕ್ಕಂತೆ ಅಪ್‌ಡೇಟ್ ಮಾಡುತ್ತದೆ.

  • ಆಲ್ಫ್ರೆಡ್, ಗ್ರಾಹಕರ ಪ್ರಸ್ತಾವನೆ ಕೋರಿಕೆಯನ್ನು ಉತ್ಪನ್ನದ ವಿವರಗಳೊಂದಿಗೆ ಹೋಲಿಸಿ, ಮೌಲ್ಯಮಾಪನ ಯೋಜನೆಯನ್ನು ಸಿದ್ಧಪಡಿಸುತ್ತದೆ.

    ನಿಮ್ಮ ಗಮನ ಬೇರೆಡೆ ಹರಿಯದಿರಲಿ

  • ಇಗ್ಗಿ, ಟ್ರಾನ್ಸ್‌ಕ್ರಿಪ್ಟ್ ಆಧಾರದ ಮೇಲೆ ಕಾರ್ಯಕ್ರಮದ ಟಿಪ್ಪಣಿಗಳು ಮತ್ತು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಡ್ರಾಫ್ಟ್‌ಗಳನ್ನು ಪರಿಶೀಲನೆಗೆ ಸಿದ್ಧಪಡಿಸುತ್ತದೆ.

    ಎಲ್ಲಾ ವಿವರಗಳನ್ನು ಒಂದೆಡೆ ಸೇರಿಸಿ

  • ಟಾಡ್, API ಸ್ಥಳಾಂತರದ ಪ್ರಗತಿಯನ್ನು ಗಮನಿಸುತ್ತದೆ. ಎರಡು pull request ಗಳ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಿವೆ ಮತ್ತು ಹೊಂದಾಣಿಕೆ ಮುರಿಯುವ ಒಂದು ಬದಲಾವಣೆ ಪರಿಶೀಲನೆಗೆ ಬಾಕಿಯಿದೆ.

    ಕೆಲಸಗಳು ಮುಂದುವರಿಯಲಿ

  • ಜೋಜೋ ಗ್ರಾಹಕರ ಪ್ರತಿಕ್ರಿಯೆಯನ್ನು ಆಧರಿಸಿ ವೀಡಿಯೊ ಎಡಿಟರ್ ಅನ್ನು ಸುಧಾರಿಸಿ, ಪರೀಕ್ಷಿಸುತ್ತದೆ.

    ನಿಮ್ಮ ವರ್ಕ್‌ಫ್ಲೋಗಳನ್ನು ಸ್ವಯಂಚಾಲಿತಗೊಳಿಸಿ

ಭದ್ರತಾ ಕವಚ

ನಿಮ್ಮ ಪರವಾಗಿ, ನಿಮ್ಮ ನಿಯಂತ್ರಣದಲ್ಲಿ

dot ಗಳು OpenAI ನ ಅತ್ಯಾಧುನಿಕ ಮಾಡೆಲ್‌ಗಳ ಕುಟುಂಬವನ್ನು ಆಧರಿಸಿ ಕಾರ್ಯನಿರ್ವಹಿಸುತ್ತಿದ್ದು, ಗೌಪ್ಯತೆ ಮತ್ತು ಸುರಕ್ಷತೆಯ ರಕ್ಷಣೆಗಳು ಡೀಫಾಲ್ಟ್ ಆಗಿ ಸಕ್ರಿಯವಾಗಿರುತ್ತವೆ.

  • ಅಂತರ್ನಿರ್ಮಿತ ರಕ್ಷಣೆಗಳು

    ದುರುದ್ದೇಶಪೂರಿತ ಸೂಚನೆಗಳಿಂದ ರಕ್ಷಿಸಲು ಮತ್ತು ಹಾನಿಕಾರಕವಾಗಬಹುದಾದ ವರ್ತನೆಯ ಮೇಲೆ ನಿಗಾ ಇಡಲು ನೆರವಾಗುವ ಸುರಕ್ಷತಾ ಕ್ರಮಗಳ ಮೂಲಕ ಡಾಟ್ಸ್, ChatGPT ಯ ರಕ್ಷಣೆಗಳನ್ನು ಮತ್ತಷ್ಟು ಬಲಪಡಿಸುತ್ತದೆ.

  • ನೀವು ನಿಗದಿಪಡಿಸುವ ಮಿತಿಗಳು

    ಡಾಟ್ಸ್ ತಮ್ಮದೇ ಕ್ಲೌಡ್ ಕಂಪ್ಯೂಟರ್‌ಗಳಲ್ಲಿ ಕೆಲಸ ಮಾಡುತ್ತವೆ. ಯಾವ ಆ್ಯಪ್‌ಗಳನ್ನು ಸಂಪರ್ಕಿಸಬೇಕೆಂದು ಆಯ್ಕೆಮಾಡಿ, ಅವುಗಳ ಅನುಮತಿಗಳನ್ನು ನಿರ್ವಹಿಸಿ ಮತ್ತು ನಿಮ್ಮ ಕಂಪ್ಯೂಟರ್ ಅನ್ನು ಸಂಪರ್ಕಿಸಬೇಕೇ ಎಂದು ನಿರ್ಧರಿಸಿ. ನಿರ್ದಿಷ್ಟ ಕ್ರಮಗಳನ್ನು ಅನುಮತಿಸಲು, ಅನುಮೋದನೆ ಕಡ್ಡಾಯಗೊಳಿಸಲು ಅಥವಾ ನಿರ್ಬಂಧಿಸಲು ಕಸ್ಟಮ್ ನಿಯಮಗಳನ್ನು ಹೊಂದಿಸಿ.

  • ಮುಖ್ಯವಾದ ಪರಿಶೀಲನೆಗಳು

    ನಿಮ್ಮ ಖಾತೆಗಳ ಮೇಲೆ ಪರಿಣಾಮ ಬೀರಬಹುದಾದ ಅಥವಾ ಮಾಹಿತಿ ಹಂಚಿಕೊಳ್ಳುವ ಕ್ರಮಗಳು ಸ್ವಯಂ-ಪರಿಶೀಲನೆಗೆ ಒಳಪಡುತ್ತವೆ. ಅವುಗಳು ನಿಮ್ಮ ಸೂಚನೆಗಳು, ಕಸ್ಟಮ್ ನಿಯಮಗಳು ಮತ್ತು ಸುರಕ್ಷತಾ ಅಗತ್ಯಗಳಿಗೆ ಅನುಗುಣವಾಗಿವೆಯೇ ಎಂದು ಪರಿಶೀಲಿಸಲಾಗುತ್ತದೆ. ಕೆಲವಕ್ಕೆ ನಿಮ್ಮ ಅನುಮೋದನೆಯ ಅಗತ್ಯವಿದೆ. ಪಾಸ್‌ವರ್ಡ್ ಬದಲಿಸುವಂತಹ ಕ್ರಮಗಳನ್ನು ನೀವೇ ಕೈಗೊಳ್ಳಬೇಕು.

ನಿಮ್ಮ ಡಾಟ್‌ನೊಂದಿಗೆ ಒಂದು ದಿನ

ಮೊದಲ ಮೀಟಿಂಗ್‌ನಿಂದ ಮನೆಬಾಗಿಲಿಗೆ ಬರುವ ರಾತ್ರಿಯ ಊಟದವರೆಗೆ, ನಿಮ್ಮ ದಿನಚರಿಯಲ್ಲಿ ಡಾಟ್ ಹೇಗೆ ನೆರವಾಗುತ್ತದೆ ಎಂಬುದನ್ನು ತಿಳಿಯಿರಿ.

ಮರಳಿ ಬರುವ ಗ್ರಾಹಕರ ಸಂಖ್ಯೆ ಇಳಿಯಲು ಕಾರಣವಾಗಿರಬಹುದಾದ ಅಂಶಗಳನ್ನು ನಿಮ್ಮ ಪ್ರಸ್ತುತಿಗೆ ಸೇರಿಸಿದ್ದೇನೆ. ನಾವು ಇನ್ನೂ ತಿಳಿದುಕೊಳ್ಳಬೇಕಾದ ವಿಷಯಗಳನ್ನು ಗುರುತಿಸಿ, ನೀವು ಪರಿಗಣಿಸಲು ಕೆಲವು ಆಯ್ಕೆಗಳನ್ನು ಸೇರಿಸಿದ್ದೇನೆ.

ಟಿಕ್ ಗುರುತಿನ ಪ್ರತಿಕ್ರಿಯೆ
ಮಧ್ಯಾಹ್ನ 12:30

ಮರಳಿ ಬರುವ ಗ್ರಾಹಕರ ಸಂಖ್ಯೆ ಇಳಿಯಲು ಕಾರಣವಾಗಿರಬಹುದಾದ ಅಂಶಗಳನ್ನು ನಿಮ್ಮ ಪ್ರಸ್ತುತಿಗೆ ಸೇರಿಸಿದ್ದೇನೆ. ನಾವು ಇನ್ನೂ ತಿಳಿದುಕೊಳ್ಳಬೇಕಾದ ವಿಷಯಗಳನ್ನು ಗುರುತಿಸಿ, ನೀವು ಪರಿಗಣಿಸಲು ಕೆಲವು ಆಯ್ಕೆಗಳನ್ನು ಸೇರಿಸಿದ್ದೇನೆ.

ಟಿಕ್ ಗುರುತಿನ ಪ್ರತಿಕ್ರಿಯೆ
ಮಧ್ಯಾಹ್ನ 12:30

ಕೆಲಸದಲ್ಲಿ

ನಿಮ್ಮ ಮುಂದಿನ ಪ್ರಸ್ತುತಿಯನ್ನು ಅದ್ಭುತವಾಗಿಸಿ

ಮಾರಾಟ ಹೆಚ್ಚಾಗಿದೆ, ಆದರೆ ಮರಳಿ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ನಿಮ್ಮ ಡಾಟ್ ಅಂಕಿಅಂಶಗಳನ್ನು ಗ್ರಾಹಕರ ಪ್ರತಿಕ್ರಿಯೆಯೊಂದಿಗೆ ಹೋಲಿಸಿ, ಏನು ಬದಲಾಗಿದೆ ಎಂದು ಪರಿಶೀಲಿಸಿ, ನಾಯಕತ್ವ ತಂಡಕ್ಕಾಗಿ ನಿಮ್ಮ ಪ್ರಸ್ತುತಿಯನ್ನು ಅಪ್‌ಡೇಟ್ ಮಾಡುತ್ತದೆ. ಹೊಸ ಅಂಕಿಅಂಶಗಳು ಬಂದಂತೆ, ಅದು ಎಲ್ಲವನ್ನೂ ಪ್ರಸ್ತುತವಾಗಿರಿಸುತ್ತದೆ.

ನಿಮಗೆ ಬೇಕಾದಲ್ಲೇ

ವೆಬ್, ಮೊಬೈಲ್ ಮತ್ತು ಡೆಸ್ಕ್‌ಟಾಪ್‌ನಲ್ಲಿ ChatGPT ಮೂಲಕ ನಿಮ್ಮ ಡಾಟ್‌ಗೆ ಸಂದೇಶ ಕಳುಹಿಸಿ ಅಥವಾ ಕರೆ ಮಾಡಿ. ಕೆಲಸ ಸಾಗುತ್ತಿರುವಾಗ ಹೊಸ ಮಾಹಿತಿ ಹಂಚಿಕೊಳ್ಳಿ, ಪ್ರಶ್ನೆಗಳನ್ನು ಕೇಳಿ ಅಥವಾ ದಿಕ್ಕನ್ನು ಬದಲಿಸಿ. ಯಾವುದಾದರೂ ವಿಷಯಕ್ಕೆ ನಿಮ್ಮ ಗಮನ ಬೇಕಾದಾಗ ಅದು ನಿಮ್ಮನ್ನು ಸಂಪರ್ಕಿಸುತ್ತದೆ.

ನಿಮ್ಮ dot‌ಗೆ ಟೆಕ್ಸ್ಟ್ ಕಳುಹಿಸುವ ಸೌಲಭ್ಯ ಮುಂದೆ ಬರಲಿದೆ.

ChatGPT

ಸಂಭಾಷಣೆ ಪ್ರಾರಂಭಿಸಿ. ನೀವು ಬಿಡುವು ತೆಗೆದುಕೊಂಡರೂ ನಿಮ್ಮ ಡಾಟ್ ಕೆಲಸವನ್ನು ಮುಂದುವರಿಸುತ್ತದೆ.

How to get your dot

Dots are available in ChatGPT on web, mobile, and desktop and are included with ChatGPT Pro, Business, and Enterprise plans. Availability depends on plan, seat type, and eligible markets. Enterprise users can try dots when enabled by their workspace admin.

ಡಾಟ್, ಇನ್ನು ನೀನು ನೋಡಿಕೋ

ನಿಮ್ಮ ಡಾಟ್ ರಚಿಸಿ