ತಾವಾಗಿಯೇ ಅಪ್ ಟು ಡೇಟ್ ಆಗಿರಿಸುವ ಪುಟಗಳು
ಪುಟದಲ್ಲೇ ChatGPT ಜೊತೆಗೆ ಬರೆಯಿರಿ, ದೃಶ್ಯರೂಪ ನೀಡಿ, ಸಂಶೋಧಿಸಿ ಮತ್ತು ಕೋಡ್ ಬರೆಯಿರಿ. ನಿಮ್ಮ ಸಂಪರ್ಕಿತ ಸಾಧನಗಳಿಂದ ಅದು ಅಪ್‌ಡೇಟ್ ಆಗುವಂತೆ ಸೆಟ್ ಮಾಡಿ. ಅದನ್ನು ಪ್ರಸ್ತುತವಾಗಿಡಲು ನೀವು ಹೆಚ್ಚು ಸಮಯ ವ್ಯಯಿಸಬೇಕಾಗಿಲ್ಲ.
ChatGPT ಸ್ಪೇಸ್
ChatGPT ಯಲ್ಲಿ ನಿಮ್ಮ ತಂಡದೊಂದಿಗೆ ಮತ್ತು AI ಏಜೆಂಟ್‌ಗಳೊಂದಿಗೆ ಸಂವಾದಾತ್ಮಕ ಪುಟಗಳು, ಸ್ಲೈಡ್‌ಗಳು ಮತ್ತು ಸೈಟ್‌ಗಳನ್ನು ರಚಿಸಿ. ಒಂದೇ ಸಂದರ್ಭ ಮಾಹಿತಿಯನ್ನು ಆಧರಿಸಿ ಕೆಲಸ ಮಾಡಿ, ಪರಸ್ಪರರ ಕಲ್ಪನೆಗಳನ್ನು ಮತ್ತಷ್ಟು ಬೆಳೆಸಿ.
Plus, Pro, ಬಿಸಿನೆಸ್ ಮತ್ತು ಎಂಟರ್‌ಪ್ರೈಸ್ ಪ್ಲಾನ್ಗಳಲ್ಲಿ ಲಭ್ಯವಿದೆ.
ಪುಟದಲ್ಲೇ ChatGPT ಜೊತೆಗೆ ಬರೆಯಿರಿ, ದೃಶ್ಯರೂಪ ನೀಡಿ, ಸಂಶೋಧಿಸಿ ಮತ್ತು ಕೋಡ್ ಬರೆಯಿರಿ. ನಿಮ್ಮ ಸಂಪರ್ಕಿತ ಸಾಧನಗಳಿಂದ ಅದು ಅಪ್‌ಡೇಟ್ ಆಗುವಂತೆ ಸೆಟ್ ಮಾಡಿ. ಅದನ್ನು ಪ್ರಸ್ತುತವಾಗಿಡಲು ನೀವು ಹೆಚ್ಚು ಸಮಯ ವ್ಯಯಿಸಬೇಕಾಗಿಲ್ಲ.
ನಿಮ್ಮ ಮನಸ್ಸಿನಲ್ಲಿರುವುದನ್ನು ChatGPT ಗೆ ತಿಳಿಸಿ. ಚಿತ್ರಗಳು, ಚಾರ್ಟ್‌ಗಳು ಮತ್ತು ಸಂವಾದಾತ್ಮಕ ವಿಷುವಲ್‌ಗಳೊಂದಿಗೆ ಅಚ್ಚುಕಟ್ಟಾದ, ಪ್ರಸ್ತುತಿಗೆ ಸಿದ್ಧವಾದ ಸ್ಲೈಡ್‌ಗಳನ್ನು ಪಡೆಯಿರಿ. ಸಿದ್ಧವಾದಾಗ, ಯಾವುದೇ ಸ್ವರೂಪದಲ್ಲಿ ರಫ್ತುಮಾಡಿ.
ಯಾವುದೇ ಕಲ್ಪನೆ, ಪ್ರಾಜೆಕ್ಟ್ ಅಥವಾ ಈವೆಂಟ್‌ಗಾಗಿ ವೆಬ್‌ಸೈಟ್ ಅಥವಾ ಆ್ಯಪ್ ರಚಿಸಿ. ಅದನ್ನು ನಿಮ್ಮ ತಂಡದೊಂದಿಗೆ ಹಂಚಿಕೊಳ್ಳಿ ಅಥವಾ ಯಾರು ಬೇಕಾದರೂ ಬಳಸುವಂತೆ ಪ್ರಕಟಿಸಿ.
ತಂಡದವರೊಂದಿಗೆ ಪುಟಗಳನ್ನು ಎಡಿಟ್ ಮಾಡಿ, ಫೀಡ್‌ಬ್ಯಾಕ್ ಅನ್ನು ಹಂಚಿಕೊಳ್ಳಿ ಮತ್ತು ಬದಲಾವಣೆಗಳನ್ನು ಮಾಡಲು ChatGPT ಯನ್ನು ಕೇಳಿ—ಎಲ್ಲವೂ ಒಂದೇ ಡ್ರಾಫ್ಟ್‌ನಲ್ಲಿ ಮಾಡಿ.
ನಿಮ್ಮ ಪುಟಗಳು, ಸ್ಲೈಡ್‌ಗಳು, ಸ್ಪ್ರೆಡ್‌ಶೀಟ್‌ಗಳು, ಚಿತ್ರಗಳು ಮತ್ತು ಸೈಟ್‌ಗಳನ್ನು ಒಟ್ಟಿಗೆ ಇರಿಸಿ. ನಿಮ್ಮ ತಂಡ ಮತ್ತು ಏಜೆಂಟ್‌ಗಳೊಂದಿಗೆ ಕೆಲಸವನ್ನು ಮುಂದುವರಿಸಿ ಅಥವಾ ChatGPT ಅಥವಾ ಟೆಂಪ್ಲೇಟ್ ಅನ್ನು ಬಳಸಿ ಹೊಸದನ್ನು ಆರಂಭಿಸಿ.
ಪುಟಗಳು, ಸ್ಲೈಡ್‌ಗಳು, ಸೈಟ್‌ಗಳು ಮತ್ತು ಸಂವಾದಾತ್ಮಕ ಪ್ರಾಯೋಗಿಕ ಮಾದರಿಗಳನ್ನು ಒಟ್ಟಾಗಿ ರಚಿಸಿ.

ಚದುರಿದ ಟಿಪ್ಪಣಿಗಳನ್ನು ಮಾಡಬೇಕಾದ ಕೆಲಸಗಳ ಪಟ್ಟಿಯಾಗಿ ರೂಪಿಸಿ. ಆದ್ಯತೆಗಳು ಬದಲಾದಂತೆ ಪಟ್ಟಿ ಅಪ್‌ಡೇಟ್ ಆಗುವಂತೆ ಹೊಂದಿಸಿ ಮತ್ತು ಮುಂದಿನ ಕೆಲಸಕ್ಕೆ ChatGPT ಸಹಾಯ ಕೇಳಿ.






ಪ್ರಾಜೆಕ್ಟ್ ಪ್ಲಾನ್ ಅನ್ನು ಅಪ್‌ಡೇಟ್ ಆಘಿರಿಸಲು, ಮುಂದಿನ ಹಂತಗಳನ್ನು ವ್ಯವಸ್ಥಿತಗೊಳಿಸಲು ಅಥವಾ ಸ್ಲೈಡ್ ಪರಿಷ್ಕರಿಸಲು ನಿಮ್ಮ dot ಅನ್ನು ಕೇಳಿ. ನಿಮ್ಮ ಗಮನದ ಅಗತ್ಯವಿರುವ ವಿಷಯಗಳನ್ನು ಗುರುತಿಸಲು ಇದು ChatGPT ಸ್ಪೇಸ್‌ನ ಸಂದರ್ಭ ಮಾಹಿತಿಯನ್ನೂ ಬಳಸುತ್ತದೆ. ಅರ್ಹ ಮಾರುಕಟ್ಟೆಗಳಲ್ಲಿ Pro, ಬಿಸಿನೆಸ್ ಪ್ರೀಮಿಯಂ ಮತ್ತು ಎಂಟರ್‌ಪ್ರೈಸ್ ಪ್ಲಾನ್‌ಗಲ್ಲಿ dot ಲಭ್ಯವಿದೆ.
ChatGPT ಯ ಸೈಡ್‌ಬಾರ್‌ನಿಂದ ChatGPT ಸ್ಪೇಸ್ ತೆರೆಯಿರಿ. ಸೈಡ್‌ಬಾರ್ ಅನ್ನು ಕುಗ್ಗಿಸಿದ್ದರೆ, ChatGPT ಸ್ಪೇಸ್ ಅನ್ನು ಹುಡುಕಲು ಅದನ್ನು ವಿಸ್ತರಿಸಿ. ಈಗಿರುವ ಸಂಭಾಷಣೆಯನ್ನು ಪುಟವಾಗಿ ಪರಿವರ್ತಿಸಲು ChatGPT ಯನ್ನು ಕೇಳಿ ಅಥವಾ ಟೆಂಪ್ಲೇಟ್‌ನಿಂದ ಪ್ರಾರಂಭಿಸಿ. ನಿಮ್ಮ ಸಂಕ್ಷಿಪ್ತ ವಿವರಣೆ ಅಥವಾ ಮೂಲ ಫೈಲ್‌ಗಳನ್ನು ಸೇರಿಸಿ. ನಂತರ ಕೆಲಸವನ್ನು ಸುಧಾರಿಸಲು ChatGPT ಸಹಾಯ ಕೇಳಿ.
ChatGPT ಯಲ್ಲಿ ನೀವು ರಚಿಸುವ, ಅಪ್‌ಲೋಡ್ ಮಾಡುವ ಮತ್ತು ಹಂಚಿಕೊಳ್ಳುವ ಪುಟಗಳು ಹಾಗೂ ಫೈಲ್ಗಳಿಗೆ ChatGPT ಸ್ಪೇಸ್ ನೆಲೆಯಾಗಿದೆ. ಪ್ರಾಜೆಕ್ಟ್ಗೆ ಸಂಬಂಧಿಸಿದ ಮಾಹಿತಿಯನ್ನು ಒಟ್ಟುಗೂಡಿಸಲು ಮತ್ತು ಕೆಲಸವನ್ನು ಮುಂದುವರಿಸಲು ಇದನ್ನು ಬಳಸಿ.
ಪ್ರಾಜೆಕ್ಟ್ ಪ್ಲಾನ್ ಬರೆಯಿರಿ, ಸಂಶೋಧನೆಯನ್ನು ಆಯೋಜಿಸಿ ಅಥವಾ ನಿರ್ಧಾರಕ್ಕೆ ಬರಲು ವಿವಿಧ ಅಂಶಗಳನ್ನು ಪರಿಶೀಲಿಸಿ. ಪಠ್ಯ, ಚಿತ್ರಗಳು, ಚಾರ್ಟ್‌ಗಳು ಮತ್ತು ಸಂವಾದಾತ್ಮಕ ಸಾಧನಗಳನ್ನು ಒಟ್ಟುಗೂಡಿಸಿ. ನಂತರ ಪುಟವನ್ನು ಪರಿಷ್ಕರಿಸಲು ChatGPT ಸಹಾಯ ಕೇಳಿ.
ಎಡಿಟ್ ಮಾಡಲು ಪ್ರವೇಶ ಇರುವವರು ಒಂದೇ ಪುಟದಲ್ಲಿ ಕೆಲಸ ಮಾಡಬಹುದು, ಕಾಮೆಂಟ್ಗಳನ್ನು ನೀಡಬಹುದು ಮತ್ತು ಬದಲಾವಣೆಗಳನ್ನು ಮಾಡಲು ತಮ್ಮದೇ ChatGPT ಸಹಾಯ ಕೇಳಬಹುದು.
ಸಹಯೋಗಿಗಳನ್ನು ಆಹ್ವಾನಿಸಲು ಹಂಚಿಕೊಳ್ಳಿ ಆಯ್ಕೆಯನ್ನು ಬಳಸಿ ಹಾಗೂ ವೀಕ್ಷಿಸುವ ಅಥವಾ ಎಡಿಟ್ ಮಾಡುವ ಅನುಮತಿಯನ್ನು ಆಯ್ಕೆಮಾಡಿ. ವರ್ಕ್ಸ್ಪೇಸ್ನಲ್ಲಿ ನಿರ್ವಾಹಕರ ಸೆಟ್ಟಿಂಗ್ಗಳು ಮತ್ತು ಹಂಚಿಕೆಯ ನಿಯಮಗಳು ಅನ್ವಯಿಸುತ್ತವೆ. ತಂಡಗಳ ವೈಶಿಷ್ಟ್ಯ ಸಕ್ರಿಯವಾಗಿದ್ದರೆ, ನೀವು ತಂಡದೊಂದಿಗೆ ಹಂಚಿಕೊಳ್ಳಬಹುದು.
ಇಲ್ಲ. ಸಹಯೋಗಿಗಳು ಹಂಚಿಕೊಂಡ ಪುಟದಲ್ಲಿರುವ ವಿಷಯವನ್ನು ನೋಡಬಹುದು. ಆದರೆ ಪುಟವನ್ನು ಹಂಚಿಕೊಂಡರೆ ಅವರಿಗೆ ನಿಮ್ಮ ಖಾಸಗಿ ಚಾಟ್ಗಳು ಅಥವಾ ವೈಯಕ್ತಿಕ ನೆನಪಿಗೆ ಪ್ರವೇಶ ಸಿಗುವುದಿಲ್ಲ. ಹಂಚಿಕೊಳ್ಳುವ ಮೊದಲು ಪುಟಕ್ಕೆ ನಕಲಿಸಿದ ಎಲ್ಲಾ ವಿಷಯವನ್ನೂ ಪರಿಶೀಲಿಸಿ.
ಫೈಲ್‌ಗಳನ್ನು ಸೇರಿಸಿ ಅಥವಾ ಸಂಪರ್ಕಿತ ಸಾಧನವನ್ನು ಬಳಸಲು ChatGPT ಯನ್ನು ಕೇಳಿ. ಲಿಂಕ್ ಮಾಡಿದ ಮೂಲ ಫೈಲ್ ಅನುಮತಿಗಳು ಬದಲಾಗುವುದಿಲ್ಲ. ಪುಟಕ್ಕೆ ನಕಲಿಸಿದ ಅಥವಾ ಸಾರಾಂಶವಾಗಿ ಸೇರಿಸಿದ ವಿಷಯವು ಪುಟಕ್ಕೆ ಪ್ರವೇಶವಿರುವವರಿಗೆ ಕಾಣಿಸುತ್ತದೆ.
ಏನಾದರೂ ಬದಲಾದಾಗ ಪುಟವನ್ನು ಅಪ್‌ಡೇಟ್ ಮಾಡಲು ChatGPT ಯನ್ನು ಕೇಳಿ. ನಿಯಮಿತ ಅಪ್ಡೇಟ್ಗಳಿಗಾಗಿ, ಏನನ್ನು ಅಪ್‌ಡೇಟ್ ಮಾಡಬೇಕು, ಯಾವ ಮೂಲಗಳನ್ನು ಬಳಸಬೇಕು ಮತ್ತು ಎಷ್ಟು ಬಾರಿ ಚಾಲನೆ ಮಾಡಬೇಕು ಎಂಬ ಸೂಚನೆಗಳೊಂದಿಗೆ ಸ್ವಯಂಚಾಲಿತ ಕಾರ್ಯವನ್ನು ಸೆಟಪ್ ಮಾಡಿ. ಬದಲಾವಣೆಗಳನ್ನು ಪರಿಶೀಲಿಸಲು ಮರಳಿ ಬನ್ನಿ.
ಪ್ಲಸ್, Pro, ಬಿಸಿನೆಸ್ ಮತ್ತು ಎಂಟರ್‌ಪ್ರೈಸ್ ಯೋಜನೆಗಳಲ್ಲಿ ChatGPT ಸ್ಪೇಸ್ ಲಭ್ಯವಿದೆ.
ChatGPT ಸ್ಪೇಸ್ ಬಳಸಲು ಪ್ರಾರಂಭಿಸುವುದಕ್ಕಾಗಿ ಮಾರ್ಗದರ್ಶಿಗಳು ಮತ್ತು ಉದಾಹರಣೆಗಳನ್ನು ನೋಡಿ.
ಕಲ್ಪನೆಗಳನ್ನು ಪೂರ್ಣಗೊಂಡ ಕೆಲಸವಾಗಿ ರೂಪಿಸುವ ಇನ್ನಷ್ಟು ವಿಧಾನಗಳನ್ನು ಅನ್ವೇಷಿಸಿ.
ನೀವು ಬಳಸುವ ಸಾಧನಗಳನ್ನು ಸಂಪರ್ಕಿಸಿ, ನಿಮ್ಮ ಕೆಲಸಕ್ಕೆ ಇನ್ನಷ್ಟು ಸಂದರ್ಭ ಮಾಹಿತಿಯನ್ನು ಸೇರಿಸಿ.





